Wednesday, January 4, 2012

Ettina Bhuja - Malpe

ಲೆಕ್ಕ ಮಾಡಿ ಹೇಳುವುದಾದರೆ ಇದು ನನ್ನ ೧೦ನೆ ಚಾರಣ. ಸ್ವಲ್ಪ ಸುಲಭದ ಚಾರಣ ಅಂತಲೇ ಹೇಳಬಹುದು. ನಾವು ೪ ಸ್ನೇಹಿತರು ಹೊರಟಿದ್ದು ಡಿಸೆಂಬರ್ ೩೦ರ ರಾತ್ರಿ. ಮೂಡಿಗೆರೆ ಇಂದ ೧ ಘಂಟೆಯ ಪ್ರಯಾಣ ನಮ್ಮನ್ನು ತಲುಪಿಸಿದ್ದು ಭ್ಯರಾಪುರ ಗ್ರಾಮಕ್ಕೆ. ಅಲ್ಲಿಂದ ಮುಂದೆ ೪ ಕಿಲೋಮೀಟರುಗಳ ಸ್ವಲ್ಪ ಸುಲಭದ ಹಾದಿ, ಮಧ್ಯದಲ್ಲಿ ಭ್ಯರವೆಶ್ವರ ದೇವಸ್ತಾನದಲ್ಲಿ ವಿರಮಿಸಿ ಮುಂದುವರಿದೆವು.

ಅದರೂ ಕೂಡ, ಚಾರಣಕ್ಕೆ ಕಳಶವಿಟ್ಟಂತೆ ದಾರಿ ತಪ್ಪಿಸಿಕೊಂಡು ೩ ಕಿಲೋಮೀಟರು ಹೆಚ್ಚಾಗಿ ನಡೆದೆವು. ಎತ್ತಿನ ಭುಜವನ್ನ ಎಡಗಡೆ ಇದೆ ಎಂದುಕೊಂದು ನಡೆದಿದ್ದ ನಮಗೆ, ಪರ್ವತ ಬಲಗಡೆ ಕಂಡು ಮಧ್ಯದಲ್ಲಿ ಒಂದು ಕಣಿವೆ ಕಂಡಾಗಲೇ ಅರಿವಾಗಿದ್ದು ದಾರಿ ತಪ್ಪಿದ್ದೇವೆಂದು. ಕೊನೆಗೆ ಹೋದ ದಾರಿಯಲ್ಲೇ ವಾಪಸು ನೆಡೆದು, ಹಾಗು ಹೀಗೂ ಬೆಟ್ಟದ ಕೆಳಭಾಗವನ್ನು ಮುಟ್ಟಿದೆವು.
ಅಲ್ಲೇ ನಮ್ಮ ಅವತ್ತಿನ ಬಿಡಾರ. ಟೆಂಟ್ ಹಾಕಿ, ಟೀ ಮಾಡಿ ಕುಡಿದು, ಶಿಖರ ಮುಟ್ಟಲು ನಡೆದೆವು. ಸಂಜೆಯ ವೇಳೆಗೆ ವಿಪರೀತ ಗಾಳಿ, ಮಳೆ. ಎಲ್ಲಿ ಟೆಂಟ್ ಕುಸಿಯುವೊದೋ ಎಂಬ ಆತಂಕದಲ್ಲೇ ಅಡುಗೆ ಮಾಡಿ ಮಲಗಿದೆವು. ಟೆಂಟ್ ನ ಭಯದಿಂದ ಹೊಸ ವರ್ಷದ ಶುಭ ಹರಸುವ ಉತ್ಸಾಹ ಯಾರಲ್ಲೂ ಇರಲಿಲ್ಲ. ಮರುದಿನ ಬೇಗ ಎದ್ದು ಟೆಂಟ್ ಕಟ್ಟಿ, ವಾಪಾಸ್ ಮೂಡಿಗೆರೆ ಕಡೆ ಹೊರಟೆವು. ಕೊಟ್ಟಿಗೆ ಹಾರದ ಬಳಿ ಇರುವ ಅಲೆಕಾನ್ ಜಲಪಾತದಲ್ಲಿ ಮಿಂದು, ಸಂಜೆ ಹೊರನಾಡಿಗೆ ಉಳಿಯಲು ಹೊರಟೆವು.

ಮರುದಿನ ಉಡುಪಿ ಗೆ ಹೋಗಿ, ಮಲ್ಪೆ ಯ ಕಡಲ ತೀರದಲ್ಲಿ ಮಿಂದು, ಸೂರ್ಯಾಸ್ತದ ಸೌಂದರ್ಯವನ್ನು ಸವಿದು ಬೆಂಗಳೂರಿಗೆ ಹೊರಟೆವು. ೧೨ ಘಂಟೆಗಳ ಪ್ರಯಾಣ ಬೇಸರ ತಂದಿದ್ದಂತೂ ಹೌದು.

ಚಾರಣದ ಚಿತ್ರಗಳು ಕೆಳಗಿನ ಲಿಂಕ್ ನಲ್ಲಿ ಇವೆ.


4 comments:

  1. ಇನ್ನೂ ವಿಸ್ತಾರವಾಗಿ ಬರೆದ್ರೆ ಚೆನ್ನಾಗಿರುತ್ತೆ. ಚಾರಣದಲ್ಲಿ ದಾರಿತಪ್ಪುವುದೇ ನಿಜವಾದ ರೋಚಕತೆ. ಮಿಕ್ಕ ೯ ಚಾರಣಗಳ ಮಾಹಿತಿ ಕೊಡಿ

    ReplyDelete
  2. ಚಿಕ್ಕ ಚೊಕ್ಕ ಚಾರಣದ ಲೇಖನದ ಮಧ್ಯದಲ್ಲಿ ಭಾವಚಿತ್ರಗಳನ್ನು ಸೇರಿಸಬಹುದಾಗಿತ್ತು. ನಿಮ್ಮ ಅನುಭವವನ್ನು ಇನ್ನೂ ಎಳೆದು ಬರೆದರೆ, ಓದುಗರಿಗೆ ಹೋಗಲು ಉತ್ತೇಜಿಸುವಂತಾಗುತ್ತದೆ. ಭಾವಚಿತ್ರಗಳನ್ನು ನೋಡಲಾಗುತ್ತಿಲ್ಲ. ಕೊಂಡಿಯನ್ನು ಚಿಟುಕಿಸಿದರೆ ಈ ರೀತಿ ಬರುತ್ತಿದೆ:
    403. That’s an error.

    We're sorry, but you do not have access to this document. That’s all we know.

    ReplyDelete
  3. ಈಗ ಪ್ರಯತ್ನಿಸಿ.. ಲಿಂಕ್ ಬದಲಾಯಿಸಿದ್ದೇನೆ.
    ತಮ್ಮ ಪ್ರತಿಕ್ರಿಯೆ ಗೆ ಧನ್ಯವಾದ. ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ.

    ReplyDelete
  4. maga pakka you will be the 1st script-writer for my film....:)

    ReplyDelete